ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಜಿಎಸ್‌ಬಿ ಸಮಾಜದ ಮಹಿಳೆಯರ ವರಮಹಾಲಕ್ಷ್ಮಿ ವೃತ ಸಮಾಪ್ತಿ

ಭಟ್ಕಳ: ಜಿಎಸ್‌ಬಿ ಸಮಾಜದ ಮಹಿಳೆಯರ ವರಮಹಾಲಕ್ಷ್ಮಿ ವೃತ ಸಮಾಪ್ತಿ

Sat, 24 Aug 2024 01:40:54  Office Staff   S O news

ಭಟ್ಕಳ: ಪಟ್ಟಣದ ಶ್ರೀ ವಡೇರ ಮಠದಲ್ಲಿ ಜಿಎಸ್‌ಬಿ ಸಮಾಜದ ಮಹಿಳೆಯರು ವರಮಹಾಲಕ್ಷ್ಮಿ ವೃತವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಿ ಸಂಬ್ರಮಿಸಿದರು.

ಮುಂಜಾನೆಯಿಂದಲೆ ಗೃಹಿಣಿಯರು ತಮ್ಮ ಮನೆಗಳಲ್ಲಿ ಶ್ರಾವಣ ಶುಕ್ರವಾರದ "ಚುಡಿ ಪೂಜಾ ವಿಧಿ ಯನ್ನು ಮುಗಿಸಿ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮಿ ಯ ಮೂರ್ತಿ ಪ್ರತಿಷ್ಟಾಪನೆ ಮತ್ತು ಅಲಂಕಾರದಲ್ಲಿ ತೊಡಗಿದ್ದರು.

ಇಲ್ಲಿನ ವಡೇರ ಮಠದಲ್ಲಿ ಜಿಎಎಸ್‌ಬಿ ಮಹಿಳಾ ಸಮಾಜದ ಅದ್ಯಕ್ಷೆ ಸುನೀತಾ ಸುಧಾಕರ ಪೈ ಇವರ ನೇತೃತ್ವದಲ್ಲಿ ಸುಂದರವಾಗಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ನೂರಾರು ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಬಳಿಕಸಮಾಜ ಬಾಂಧವರಿಗೆ ಅನ್ನಸಂರ‍್ಪಣೆ ಸಏವೆ ನಡೆಯಿತು.

ವರಮಹಾಲಕ್ಷ್ಮಿ ವೃತದ ಅಂಗವಾಗಿ ಬೆಳಿಗ್ಗೆ ನಡೆದ ಕುಂಕುಮರ‍್ಚನೆಯಲ್ಲೂ ಮಹಿಳೆಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತ, ಮಹಿಳಾ ಮಂಡಳದ ಉಪಾಧ್ಯಕ್ಷೆ ರಜನಿ ರಾಮದಾಸ ಪ್ರಭು, ಕಾರ್ಯದರ್ಶಿ ರಚನಾ ಕಾಮತ, ಸಹಕರ‍್ಯರ‍್ಶಿ ವಿದ್ಯಾ ಪೈ, ಖಜಾಂಚಿ ಅಕ್ಷತಾ ಕಾಮತ, ಗೌರವಾಧ್ಯಕ್ಷೆ ನೀತಾ ಕಾಮತ ಸೇರಿದಂತೆ ಇತರರು ಸಹಕರಿಸಿದರು.  ರ‍್ಚಕ ಕಿಶೋರ ಭಟ್ ಧಾರ‍್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.


Share: